2019 ಫೆಬ್ರವರಿ 26ರಂದು ಮೊದಲಿಗೆ ದೇಶದಾದ್ಯಂತ ಈ ಯೋಜನೆಯಲ್ಲಿ ನೋಂದಣಿಯಾಗಿ ಅನೇಕ ಫಲಾನುಭವಿ ರೈತರು ಸಹಾಯಧನವನ್ನು ಪಡೆದರು. ಈಗ ಪ್ರತಿ ವರ್ಷಕ್ಕೆ 3 ಕಂತುಗಳಲ್ಲಿ ತಲಾ 2000 ರೂಗಳನ್ನು ನಾಲ್ಕು ತಿಂಗಳ ಅಂತರದಲ್ಲಿ ಈ ಯೋಜನೆಗೆ ಎಲ್ಲಾ ರೈತರು ಕೂಡ ಪಡೆಯುತ್ತಿದ್ದಾರೆ.
.ಇದುವರೆಗೂ ಕೂಡ ಯಶಸ್ವಿಯಾಗಿ 13 ಕಂತಿನ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಸಹಾಯಧನವನ್ನು ರೈತರು DBT ಮೂಲಕ ಯಾವುದೇ ಮಧ್ಯವರ್ಐಇಗಳ ಹಾ’ವ’ಳಿ ಇಲ್ಲದೇ ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪಡೆಯುತ್ತಿದ್ದಾರೆ. ಮತ್ತು ಈ ಸಹಾಯಧನವನ್ನು ತಮ್ಮ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಈಗ 14ನೇ ಕಂತಿನ ಹಣದ ಬಿಡುಗಡೆಯ ಸಮಯ ಆಗಿದೆ.
ಇದಕ್ಕಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಕೂಡ ರೈತರು ಎದುರು ನೋಡುತ್ತಿದ್ದರು. ಈಗ 14ನೇ ಕಂತಿನ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣ ಬಿಡುಗಡೆ ಯಾವಾಗ ಎನ್ನುವ ಮಾಹಿತಿ ಸಿಕ್ಕಿದೆ. ಸರ್ಕಾರದ ಅಧಿಕೃತ ವೆಬ್ಸೈಟ್ ಆದ PMEvent ಎನ್ನುವ ವೆಬ್ಸೈಟ್ ಅಲ್ಲಿ ಇದರ ಬಗ್ಗೆ ಅನೌನ್ಸ್ ಆಗಿದೆ. ಈ ಪ್ರಕಾರವಾಗಿ ಇದೇ ತಿಂಗಳು ಅಂದರೆ ಜುಲೈ 28 ನೇ ತಾರೀಕು ಶುಭ ಶುಕ್ರವಾರದಂದು ದೇಶದ 8.5 ಕೋಟಿ ರೈತರುಗಳು ಕಿಸಾನ್ ಸಮ್ಮಾನ್ ನಿಧಿ ಹಣವನ್ನು ಪಡೆಯುತ್ತಿದ್ದಾರೆ.
ಆರಂಭದಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗಿದ್ದ ರೈತರ ಸಂಖ್ಯೆ ಅಧಿಕವಾಗಿತ್ತು. ಆದರೆ 13 ನೇ ಕಂತಿನಿಂದ ಇದು ಪ್ರತಿ ಕಂತಿನಲ್ಲೂ ಇಳಿಕೆ ಆಗುತ್ತಿದೆ. ಕಾರಣ ರೈತರು ಕೊಟ್ಟಿರುವ ಮಾಹಿತಿಗಳಲ್ಲಿ ಹೊಂದಾಣಿಕೆ ಆಗದೆ ಇರುವುದು, ಮತ್ತು ಈ ಯೋಜನೆಗೆ KYC ಮಾಡಿಸುವುದು ಕಡ್ಡಾಯ ಎಂದು ತಿಳಿಸಿದ ನಂತರವೂ ರೈತರು ತಮ್ಮ KYC ಅಪ್ಡೇಟ್ ಮಾಡಿಸದೆ ಇರುವುದು.
ಈ ಕಾರಣಕ್ಕಾಗಿ ಅನೇಕರು ಅಂಕಿ ಅಂಶಗಳನ್ನು ಗಮನಿಸುವುದಾದರೆ 14ನೇ ಕಂತಿನ ಫಲಾನುಭವಿಗಳ ಸಂಖ್ಯೆ ಕೂಡ ಇಳಿಮುಖವಾಗಿದೆ. ಆದ್ದರಿಂದ ರೈತರು ತಪ್ಪದೆ ಮತ್ತೊಮ್ಮೆ ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಗಳಲ್ಲಿ ಹೋಗಿ KYC ಅಪ್ಡೇಟ್ ಮಾಡಿಸಬೇಕು. ದಾಖಲೆಗಳಾಗಿ ಸಲ್ಲಿಸಿರುವ ತಮ್ಮ ಬ್ಯಾಂಕ್ ಖಾತೆ ವಿವರ, ಜಮೀನಿನ ಪಹಣಿ ಪತ್ರದ ವಿವರ ಹಾಗೂ ಆಧಾರ್ ಕಾರ್ಡ್ ಅಲ್ಲಿರುವ ಹೆಸರುಗಳಿಗೆ ಹೊಂದಾಣಿಕೆ ಆಗದೆ ಇದ್ದಲ್ಲಿ ಅವರ ಹೆಸರು ಕೂಡ ಕೈ ಬಿಟ್ಟು ಹೋಗಿರುವ ಸಾಧ್ಯತೆ ಇರುತ್ತದೆ ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡು ಲೋಪಗಳಿದ್ದರೆ ಸರಿಪಡಿಸಿಕೊಳ್ಳಬೇಕು.
ಈ ಯೋಜನೆಯಲ್ಲಿ ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚಲು ಸರ್ಕಾರ ಕಟ್ಟುನಿಟ್ಟಿನ ನಿಯಮ ಕೈಗೊಂಡಿದೆ. ಇದರಿಂದ ಕೂಡ ಫಲಾನುಭವಿಗಳ ಸಂಖ್ಯೆ ಇಳಿಕೆ ಆಗಿದೆ. PM ಕಿಸಾನ್ ಸಮ್ಮಾನ್ ನಿಧಿ 14ನೇ ಕಂತಿನ ಹಣವನ್ನು ಪಡೆಯುತ್ತಿರುವ ರೈತರಿಗೆ ಶುಭಾಶಯವನ್ನು ಹೇಳುತ್ತಾ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೆ ತಪ್ಪದೆ ಹಂಚಿಕೊಂಡು ಇನ್ನಷ್ಟು ರೈತರಿಗೆ ಮಾಹಿತಿ ತಲುಪುವಂತೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇವೆ.
0 Comments