ಕರ್ನಾಟಕದ ಗ್ಯಾರೆಂಟಿ ಕಾರ್ಡ್ ಯೋಜನೆಗಳಲ್ಲಿ ಮಹತ್ವಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಸೋಮವಾರ ಸಂಜೆ ಉದ್ಘಾಟನೆಯಾಗಿದೆ. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಅವರು ಈ ಗೃಹಲಕ್ಷ್ಮಿ ಯೋಜನೆಗೆ ಯಾವ ರೀತಿ ನೋಂದಣಿ ಆಗಬೇಕು.
ಅರ್ಜಿ ಎಲ್ಲಿ ಹೇಗೆ ಸಲ್ಲಿಸಬೇಕು, ದಾಖಲೆಗಳಾಗಿ ಏನೇನು ಬೇಕು ಎನ್ನುವುದರ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಆ ಪ್ರಕಾರವಾಗಿ ನೋಂದಣಿಯಾಗಿ ಅರ್ಜಿ ಸಲ್ಲಿಸಬೇಕು.ಇದರ ಬಗ್ಗೆ ಮಾಹಿತಿ ತಿಳಿಸಿಕೊಡುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
ಅರ್ಜಿ ಸಲ್ಲಿಸುವುದಕ್ಕೆ ಪಾಲಿಸಬೇಕಾದ ಪ್ರಮುಖ ಅಂಶಗಳು;-
● ಮೊದಲಿಗೆ ಹೆಡ್ ಆಫ್ ದ ಫ್ಯಾಮಿಲಿ ಆಧಾರ್ ಕಾರ್ಡ್ ಅಲ್ಲಿ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ 8147500500 ಈ ಮೊಬೈಲ್ ಸಂಖ್ಯೆಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು SMS ಮೂಲಕ ಕಳುಹಿಸಬೇಕು.
● SMS ಕಳುಹಿಸಿದ ಕೆಲವೇ ಸೆಕೆಂಡುಗಳಲ್ಲಿ ನಿಮಗೆ VM-SEVSIN ಕರ್ನಾಟಕ ಸರ್ಕಾರದ ವತಿಯಿಂದ ನೀವು ಯಾವ ದಿನಾಂಕದಲ್ಲಿ ಯಾವ ಸಮಯಕ್ಕೆ ಯಾವ ಸ್ಥಳದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎನ್ನುವುದರ ವಿವರ ಮೆಸೇಜ್ ಅಲ್ಲಿ ರಿಪ್ಲೈ ಯಾಗಿ ಬರುತ್ತದೆ.
● ಕೆಲವರಿಗೆ SMS ಕಳುಹಿಸಿದರು ಕೂಡ ರಿಪ್ಲೈ ಬಂದಿರುವುದಿಲ್ಲ, ಸರ್ವರ್ ಸಮಸ್ಯೆ ಆಗಿರುವ ಕಾರಣದಿಂದಾಗಿ ಈ ರೀತಿ ಆಗಬಹುದು ಅವರು ಮತ್ತೊಮ್ಮೆ, ಮಗದೊಮ್ಮೆ SMS ಕಳುಹಿಸಿ ಪ್ರಯತ್ನಿಸಬಹುದು.
● ಕೆಲವರಿಗೆ 24 ಗಂಟೆ ನಂತರ ಮತ್ತೆ ಪ್ರಯತ್ನಿಸಿ ಎನ್ನುವ ರಿಪ್ಲೈ ಕೂಡ ಕರ್ನಾಟಕ ಸರ್ಕಾರದ ವತಿಯಿಂದ ಸಿಗಬಹುದು.
● ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ನಿಮಗೆ SMS ಮೂಲಕ ಇದರಲ್ಲಿ ಯಾವ ಗ್ರಾಮದಲ್ಲಿ ಯಾವ ಕೇಂದ್ರದಲ್ಲಿ ಯಾವ ಸಮಯಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿ ಬರುತ್ತದೆ.
● ಸಮಯ, ಸ್ಥಳ ಹಾಗೂ ದಿನಾಂಕದ ಮಾಹಿತಿ SMS ಮೂಲಕ ಸಿಕ್ಕಮೇಲೆ ಆ ಕೇಂದ್ರಕ್ಕೆ ನೀವು ಅಗತ್ಯವಾಗಿ ಬೇಕಾದ ದಾಖಲೆಗಳ ಜೊತೆ ಹೋಗಿ ಅರ್ಜಿ ಸಲ್ಲಿಸಬಹುದು.
● ಕುಟುಂಬದ ಪಡಿತರ ಚೀಟಿ, ಪತಿ ಮತ್ತು ಪತ್ನಿಯ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ವಿವರ ಹಾಗೂ ಮೊಬೈಲ್ ಸಂಖ್ಯೆ ಇವುಗಳನ್ನು ದಾಖಲೆಗಳಾಗಿ ಸಲ್ಲಿಸಬೇಕು. (ಆಧಾರ್ ಕಾರ್ಡ್ ಲಿಂಕ್ ಆಗಿರದ ಪಾಸ್ ಬುಕ್ ವಿವರ ಸಲ್ಲಿಸುವುದಾದರೆ ಕೆಲ ಕಂಡಿಷನ್ ಮೇರೆಗೆ ಅದಕ್ಕೂ ಕೂಡ ಅವಕಾಶವಿದೆ).
0 Comments