ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು SMS ಮಾಡೋದು ಬೇಡ, ಸೇವಾಕೆಂದ್ರಕ್ಕೂ ಹೋಗೋದು ಬೇಡ. ಹೊಸ ಆಪ್ ಬಿಡುಗಡೆ, ಈ ಆಪ್ ಮೂಲಕ ಅರ್ಜಿ ಸಲ್ಲಿಸುವುದು

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು SMS ಮಾಡೋದು ಬೇಡ, ಸೇವಾಕೆಂದ್ರಕ್ಕೂ ಹೋಗೋದು ಬೇಡ. ಹೊಸ ಆಪ್ ಬಿಡುಗಡೆ, ಈ ಆಪ್ ಮೂಲಕ ಅರ್ಜಿ ಸಲ್ಲಿಸುವುದು




 ಕಾಂಗ್ರೆಸ್ ಸರ್ಕಾರದ ನಾಲ್ಕನೇ ಗ್ಯಾರಂಟಿ ಕಾರ್ಡ್ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆ ಲಾಂಚ್ ಆಗಿದೆ. ಗೃಹಲಕ್ಷ್ಮಿ ಯೋಜನೆಗೆ ಸರ್ಕಾರವು ಬಹಳ ಸಮಯ ತೆಗೆದುಕೊಂಡು ಅರ್ಜಿ ಸಲ್ಲಿಸಲು ಒಂದು ಸುವ್ಯವಸ್ಥಿತವಾದ ವ್ಯವಸ್ಥೆ ಮಾಡಿಕೊಂಡಿದೆ. ಈಗಾಗಲೇ ಸರ್ಕಾರ ತಿಳಿಸಿರುವ ಮಾರ್ಗಸೂಚಿ ಪ್ರಕಾರ ಅರ್ಹತೆ ಹೊಂದಿರುವ ಕುಟುಂಬದ ಯಜಮಾನರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಆಗಸ್ಟ್ ತಿಂಗಳಿನಿಂದ ಸಹಾಯಧನ ಪಡೆಯಲು ಫಲಾನುಭವಿ ಗಳಾಗಬಹುದು.


ಮೊದಲಿಗೆ ಪಡಿತರ ಚೀಟಿಯಲ್ಲಿರುವ ಸಂಖ್ಯೆಯನ್ನು ಸರ್ಕಾರ ನೀಡುವ ಸಹಾಯವಾಣಿ ಸಂಖ್ಯೆಗಳಲ್ಲಿ ಒಂದಕ್ಕೆ ಕುಟುಂಬದ ಮುಖ್ಯಸ್ಥರ ಮೊಬೈಲ್ ಸಂಖ್ಯೆಯಿಂದ SMS ನಲ್ಲಿ ಕಳುಹಿಸಬೇಕು. ಬಳಿಕ VM-SEVSIN ಮೂಲಕ ಕರ್ನಾಟಕ ಸರ್ಕಾರ ವತಿಯಿಂದ ರಿಪ್ಲೈ ಬರುತ್ತದೆ. ಆ ರಿಪ್ಲೈ ಮೆಸೇಜ್ ಅಲ್ಲಿ ಸೂಚಿಸಿರುವ ಸ್ಥಳಕ್ಕೆ ಅದೇ ಸಮಯಕ್ಕೆ ದಾಖಲೆಗಳ ಜೊತೆ ಹೋಗಿ ಅರ್ಜಿ ಸಲ್ಲಿಸಲು ಸರ್ಕಾರ ಸೂಚಿಸಿದೆ.


ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒಂದನ್ನು ಸೂಚಿಸಲಾಗಿರುತ್ತದೆ.

ಸಹಾಯವಾಣಿ ಸಂಖ್ಯೆಗಳು:-

8147500500

8277000555



ಬೇಕಾಗುವ ದಾಖಲೆಗಳು:-

● ಪಡಿತರ ಚೀಟಿ ಸಂಖ್ಯೆ

● ಆಧಾರ್ ಕಾರ್ಡ್ ಸಂಖ್ಯೆ

● ಆಧಾರ್ ಕಾರ್ಡ್ ಅಲ್ಲಿರುವ ಮೊಬೈಲ್ ಸಂಖ್ಯೆ


ಒಂದು ವೇಳೆ ಸಂದೇಶ ಸಲ್ಲಿಸಿಯು ಕೂಡ ರಿಪ್ಲೈ ಬರದೇ ಇದ್ದರೆ ಅನೇಕರು ಗೊಂದಲಕ್ಕೊಳಗಾಗುತ್ತಾರೆ. ಈ ರೀತಿ ಗೊಂದಲ ನಿಮಗೂ ಇದ್ದರೆ ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವೇಳಾಪಟ್ಟಿ ಯಾವಾಗ ಎಂದು ತಿಳಿದುಕೊಳ್ಳುಲು ನೀವು ಗೃಹಲಕ್ಷ್ಮಿ ಯೋಜನೆ ಅಧಿಕೃತ ವೆಬ್ಸೈಟ್ ಗೆ ಭೇಟಿಕೊಡಿ.


ಪಡಿತರ ಚೀಟಿ ಸಂಖ್ಯೆ ಮತ್ತು ಕ್ಯಾಪ್ಚ ಕೋಡ್ ನಮೂದಿಸಿ ಆ ವೇಳಾಪಟ್ಟಿಯನ್ನು ತಿಳಿದುಕೊಳ್ಳಬಹುದು. ಬಳಿಕ ನಿಮಗೆ ವೇಳಾಪಟ್ಟಿಯಲ್ಲಿ ತಿಳಿಸಿರುವ ಸಮಯಕ್ಕೆ ಆ ಸ್ಥಳಕ್ಕೆ ದಾಖಲೆಗಳ ಜೊತೆ ಹೋಗಿ ಅರ್ಜಿ ಸಲ್ಲಿಸಬಹುದು.

ವೆಬ್ಸೈಟ್ ವಿಳಾಸ

https://sevasindhugs1.karnataka.gov.in.stat-sns


ಈಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರದಿಂದ ಆಪ್ ಕೂಡ ಬಿಡುಗಡೆ ಆಗಿದೆ. ಅದರ ಮೂಲಕವೂ ಸಹ ಅರ್ಜಿ ಸಲ್ಲಿಸಬಹುದು. ಆದರೆ ಈ ಆಪ್ ಅನ್ನು ಸರ್ಕಾರದ authorized peoples ಮಾತ್ರ ಬಳಸಬಹುದು. ಸರ್ಕಾರವು ಈ ಮೊದಲೇ 1000 ಕ್ಕೆ ಒಬ್ಬರಂತೆ ಪ್ರಜಾಪ್ರತಿನಿಧಿಗಳನ್ನು ನೇಮಿಸಲಾಗುವುದು ಎಂದು ಹೇಳಿತ್ತು. ಅವರು ಹಾಗೂ ಸರ್ಕಾರದ ಸೇವಾ ಸಿಂಧು ಕೇಂದ್ರಗಳಲ್ಲಿ ಕೆಲಸ ಮಾಡುವವರು ಮಾತ್ರ ತಮ್ಮ ಮೊಬೈಲ್ ಮೂಲಕ ಈ ಆಪ್ ಅಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಕೊಡುತ್ತಾರೆ.


ಆಪ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:-

● Gruhalakshmi final CV app ಎನ್ನುವ ಈ ಆಪ್ ಓಪನ್ ಮಾಡಿದರೆ ಅವರ ಮೊಬೈಲ್ ಸಂಖ್ಯೆ ಕೇಳುತ್ತದೆ, ಮೊಬೈಲ್ ಸಂಖ್ಯೆ ಹಾಕಿದಾಗ ಅವರ ಮೊಬೈಲ್ ಸಂಖ್ಯೆಗೆ OTP ಹೋಗುತ್ತದೆ. ಆ OTP ಯನ್ನು ನಮೂದಿಸಿ ಲಾಗ್ ಇನ್ ಆಗಬೇಕು.

● ಹೊಸ ಅರ್ಜಿಗಳು ಮತ್ತು ಸಲ್ಲಿಸಿರುವ ಅರ್ಜಿಗಳು ಎನ್ನುವ ಆಯ್ಕೆ ಇರುತ್ತದೆ ಅದರಲ್ಲಿ ಹೊಸ ಅರ್ಜಿಗಳು ಎನ್ನುವುದನ್ನು ಸೆಲೆಕ್ಟ್ ಮಾಡಬೇಕು.


● ಮೊದಲಿಗೆ ಪಡಿತರ ಚೀಟಿಯ RC ಸಂಖ್ಯೆ ಕೇಳುತ್ತದೆ ಜೊತೆಗೆ ನಿಮ್ಮ ವರ್ಗ ಯಾವುದು ಎಂದು ತಿಳಿಸಬೇಕು ಆಮೇಲೆ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿದರೆ ನಿಮ್ಮ ಆಧಾರ್ ಸಂಖ್ಯೆಯಲ್ಲಿರುವ ಮೊಬೈಲ್ ನಂಬರ್ ಗೆ OTP ಬರುತ್ತದೆ.

● ಆ OTP ನಮೂದಿಸಿದರೆ ಅರ್ಜಿ ಸಲ್ಲಿಕೆ ಪೂರ್ತಿ ಆಗುತ್ತದೆ. ನೀವು ಅರ್ಜಿ ಸಲ್ಲಿಕೆ ಸ್ವೀಕೃತಿ ಪ್ರತಿ ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು.

Post a Comment

1 Comments