ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಲ್ಲಿ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ ಎರಡು ಕೂಡ ಪ್ರಮುಖವಾದಂತಹ ಸ್ಥಾನವನ್ನು ಪಡೆದುಕೊಂಡಿದೆ. ಅದರಲ್ಲಿಯೂ ಕೂಡ ಮಹಿಳೆಯರಿಗೆ ಬಹಳ ಅಚ್ಚು ಮೆಚ್ಚಿನ ಯೋಜನೆ ಅಂದರೆ ಗೃಹಲಕ್ಷ್ಮಿ ಯೋಜನೆ ಅಂತಾನೆ ಕರೆಯಬಹುದು. ಪ್ರತಿ ತಿಂಗಳು ಮನೆಯ ಒಡತಿಗೆ ಮನೆ ಖರ್ಚಿಗಾಗಿ ಎರಡು ಸಾವಿರ ರೂಪಾಯಿಗಳನ್ನು ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ್ದು.
ಆ ಭರವಸೆಯಂತೆಯೇ ಕಳೆದ ಆರು ತಿಂಗಳಿನಿಂದಲೂ ಕೂಡ 2,000 ಗಳನ್ನು ಮಹಿಳೆಯರ ಅಕೌಂಟಿಗೆ ಜಮಾ ಮಾಡುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಪ್ರಾರಂಭವಾದಂತಹ ಈ ಗ್ರಹಲಕ್ಷ್ಮಿ ಯೋಜನೆಯ ಇದುವರೆಗೂ ಕೂಡ ಯಾವುದೇ ರೀತಿಯಾದಂತಹ ಅಡೆತಡೆಗಳು ಇಲ್ಲದೆ ಎಲ್ಲ ಮಹಿಳೆಯರ ಖಾತೆಗೂ ಕೂಡ ಪ್ರತಿ ತಿಂಗಳು 2000 ಹಣ ಜಮೆಯಾಗುತ್ತಿದೆ.
ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ.? ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ
ಆದರೆ ಕೆಲವು ಮಹಿಳೆಯರಿಗೆ ಅರ್ಜಿ ಸಲ್ಲಿಸಿದರು ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಲ್ಲ ಇನ್ನು ಕೆಲವು ಮಹಿಳೆಯರಿಗೆ 1, 2, 3ನೇ ಕಂತಿನ ಹಣೆ ಜಮೆಯಾಗಿದೆ 4, 5 ಮತ್ತು 6ನೇ ಕಂತಿನ ಹಣ ಜಮೆ ಆಗಿಲ್ಲ. ಕೆಲವರಿಗೆ ಒಂದು ತಿಂಗಳು ಹಣ ಜಮಯಾಗುವುದು ಮತ್ತೊಂದು ತಿಂಗಳು ಹಣ ಜಮೆ ಆಗದೆ ಇರುವಂತಹ ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಹಾಗಾಗಿ ಈ ತೊಂದರೆಗಳಿಗೆ ಕಾರಣವೇನು ನಾವು ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಯಾವ ಮಾರ್ಗವನ್ನು ಅನುಸರಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಂದು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ. ಗೃಹಲಕ್ಷ್ಮಿ ಯೋಜನೆಯ ಒಂದನೇ ಮತ್ತು ಎರಡನೇ ಕಂತಿನ ಹಾಗೂ ಮೂರನೇ ಕಂತಿನ ಹಣ ಮಾತ್ರ ಜಮೆಯಾಗಿ 4 5 6ನೇ ಕಂತಿನ ಹಣ ಜಮೆ ಆಗದೆ ಇರುವುದಕ್ಕೆ ಮುಖ್ಯ ಕಾರಣ ಏನೆಂದರೆ.
ನಿಮ್ಮ ರೇಷನ್ ಕಾರ್ಡ್ ಹೌದು ಇತ್ತೀಚಿಗಷ್ಟೇ ಕೆಲವು ಮಂದಿ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುವ ಸಲುವಾಗಿ ಹೊಸ ರೇಷನ್ ಕಾರ್ಡನ್ನು ಮಾಡಿಸಿಕೊಂಡಿದ್ದಾರೆ. ಆದರೆ ಸರ್ಕಾರವು ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತಂದಿದೆ ಅದೇನೆಂದರೆ ಅನರ್ಹ ರೇಷನ್ ಕಾರ್ಡ್ ಅನ್ನು ರದ್ದು ಮಾಡಬೇಕೆಂದು ಹಾಗಾಗಿ ಇದಕ್ಕಿದ್ದ ಹಾಗೆ ಸಾಕಷ್ಟು ರೇಷನ್ ಕಾರ್ಡ್ ಗಳು ರದ್ದಾಗುತ್ತಿದೆ.
ಇನ್ಮುಂದೆ ಕೇವಲ 600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.! ಹೀಗೆ ಅರ್ಜಿ ಸಲ್ಲಿಸಿ
ಈ ರೇಷನ್ ಕಾರ್ಡ್ ರದ್ದಾದವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ ಹಾಗಾಗಿ ರೇಷನ್ ಕಾರ್ಡ್ ರದ್ದಾದ ಯಜಮಾನೀಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಣ ಬರುತ್ತಿಲ್ಲ. ಈ ಕಾರಣಕ್ಕಾಗಿ ನಿಮಗೆ ಮೂರನೇ ಮತ್ತು ನಾಲ್ಕನೇ ಹಾಗೂ ಐದನೇ ಕಂತು ಹಾಗೂ 6ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಸಾಧ್ಯವಾಗಿಲ್ಲ.
ಇದರ ಜೊತೆಗೆ ಅನ್ನಭಾಗ್ಯ ಯೋಜನೆಯ ಹಣವು ಕೂಡ ಈ ಕಾರಣದಿಂದಲೇ ನಿಮ್ಮ ಅಕೌಂಟ್ ಗೆ ಆಗಿಲ್ಲ ಇದೆಲ್ಲದಕ್ಕೂ ಪರಿಹಾರವೇನು ಎಂಬುವುದನ್ನು ನೋಡುವುದಾದರೆ. ಮೊದಲು ರೇಷನ್ ಕಾರ್ಡ್ ರದ್ದಾದ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂಬುದನ್ನು ನೀವು ಮೊದಲು ಚೆಕ್ ಮಾಡಿಕೊಳ್ಳಬೇಕಾಗುತ್ತದೆ.
* ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಕ್ರೋಮ್ ಗೆ ಹೋಗಿ ಅಲ್ಲಿ https://ahara.kar.nic.in/Home/EServices ನಾವು ಇಲ್ಲಿ ಕೊಟ್ಟಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ನಿಮಗೆ ಆಹಾರ್ ವೆಬ್ಸೈಟ್ ಟ್ಯಾಬ್ ಓಪನ್ ಆಗುತ್ತದೆ ನಂತರ ಅಲ್ಲಿ ಈ ಸೇವೆಗಳು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
* ನಂತರ ಈ ಪಡಿತರ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಇಲ್ಲಿ ಕ್ಲಿಕ್ ಮಾಡಿ.
* ನಂತರ ರದ್ದು ಪಡಿಸಲದಂತಹ ರೇಷನ್ ಕಾರ್ಡ್ ಲಿಸ್ಟ್ ಎಂಬ ಟ್ಯಾಬ್ ನಿಮಗೆ ಕಾಣುತ್ತದೆ ಅಲ್ಲಿ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಮತ್ತೊಂದು ಟ್ಯಾಬ್ ಓಪನ್ ಆಗುತ್ತದೆ.
* ಅಲ್ಲಿ ಜಿಲ್ಲೆ, ತಿಂಗಳು, ವರ್ಷ ಇವೆಲ್ಲವನ್ನು ಕೂಡ ನಮೂದಿಸಬೇಕಾಗುತ್ತದೆ. ನಂತರ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಈ ರೀತಿ ಮಾಡಿದಾಗ ರೇಷನ್ ಕಾರ್ಡ್ ರದ್ದು ಆಗಿರುವಂತಹ ಪಟ್ಟಿ ಬಿಡುಗಡೆಯಾಗುತ್ತದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಯಾವುದೇ ರೀತಿಯಾದಂತಹ ಹಣ ಲಭಿಸುವುದಿಲ್ಲ ಈ ಒಂದು ಹಣವನ್ನು ಪಡೆಯಬೇಕಾದರೆ ನೀವು ಮತ್ತೊಮ್ಮೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ
0 Comments