ಬಾರ್ ಲೈಸೆನ್ಸ್ ಪಡೆಯುವುದು ಹೇಗೆ.? ಎಷ್ಟು ಬಂಡವಾಳ ಬೇಕಾಗುತ್ತದೆ.? ಎಷ್ಟು ಲಾಭ ಸಿಗುತ್ತೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಬಾರ್ ಲೈಸೆನ್ಸ್ ಪಡೆಯುವುದು ಹೇಗೆ.? ಎಷ್ಟು ಬಂಡವಾಳ ಬೇಕಾಗುತ್ತದೆ.? ಎಷ್ಟು ಲಾಭ ಸಿಗುತ್ತೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ




3000 ಜನಸಂಖ್ಯೆಗಿಂತ ಹೆಚ್ಚಿಗೆ ಜನರಿರುವ ಗ್ರಾಮಗಳಲ್ಲಿ ಸರ್ಕಾರದ ವತಿಯಿಂದಲೇ ಮದ್ಯದದಂಗಡಿ ತೆರೆಯಬೇಕು ಎನ್ನುವ ಪ್ರಸ್ತಾಪವನ್ನು ಅಬಕಾರಿ ಇಲಾಖೆ ಸರ್ಕಾರ ಮುಂದೆ ಇಟ್ಟಿದೆ ಎನ್ನುವ ವಿಚಾರ ರಾಜ್ಯದಲ್ಲಿ ಬಾರಿ ಚರ್ಚೆಯಾಗಿತ್ತು ಮಹಿಳೆಯರು ಹಾಗೂ ವಿರೋಧ ಪಕ್ಷಗಳು ಇದನ್ನು ತೀವ್ರ ವಿರೋಧಿಸಿದ್ದವು ಅಂತಿಮವಾಗಿ ಮಾನ್ಯ ಮುಖ್ಯಮಂತ್ರಿಗಳೇ ಸದ್ಯಕ್ಕೆ ಅಂತಹ ಯೋಜನೆಗಳಿಲ್ಲ ಎಂದು ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.






ಹಾಗಾದರೆ ಒಂದು ವೇಳೆ ಖಾಸಗಿಯವರು ಬಾರ್ ಓಪನ್ ಮಾಡುವುದಾದರೆ ಆ ಪ್ರಕ್ರಿಯೆ ಹೇಗಿರುತ್ತದೆ? ಯಾರು ಈ ರೀತಿ ಬಾರ್ ಲೈಸೆನ್ಸ್ ಪಡೆಯಲು ಅರ್ಹರು? ಅವರು ಏನೆಲ್ಲಾ ದಾಖಲೆಗಳನ್ನು ಹೊಂದಿರಬೇಕು ಮತ್ತು ಎಷ್ಟು ಬಂಡವಾಳ ಬೇಕಾಗುತ್ತದೆ ಎನ್ನುವುದರ ಕುರಿತು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.






ಬಾರ್ ಎಂದ ತಕ್ಷಣ ಎಲ್ಲವೂ ಒಂದೇ ರೀತಿಯ ಬಾರ್ ಗಳಾಗಿರುವುದಿಲ್ಲ, ಇದರಲ್ಲಿ ಹಲವು ವಿಧಗಳಿವೆ.
Cl 1, Cl2, Cl4, Cl5, Cl6a, Cl7, Cl9 ಮತ್ತು Cl11.
Cl 1 ಎಂದರೆ ಹೋಲ್ ಸೇಲ್ ಬಾರ್
Cl2 ಎಂದರೆ ರಿಟೇಲರ್ ಬಾರ್
Cl4 ಎಂದರೆ ಕ್ಲಬ್ ಬಾರ್
Cl6a ಎಂದರೆ ಸ್ಟಾರ್ ಹೋಟೆಲ್ ಬಾರ್
Cl7 ಎಂದರೆ ಹೋಟೆಲ್ ಅಂಡ್ ಬೋರ್ಡಿಂಗ್ ಹೌಸ್
Cl 9 ಎಂದರೆ ಬಾರ್ ಎಂಡ್ ರೆಸ್ಟೋರೆಂಟ್.


ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಆರಂಭ.! ಮತ್ತೆ 9 ದಿನಗಳ ಕಾಲವಕಾಶ ನೀಡಿದ ಸರ್ಕಾರ, ತಪ್ಪದೇ ಈ ಬಾರಿ ಅವಕಾಶ ಸದುಪಯೋಗ ಪಡಿಸಿಕೊಳ್ಳಿ


ಬಾರ್ ತೆರೆಯುವ ಪ್ರಕ್ರಿಯೆ:-


● ಮೊದಲು ಬಾರ್ ಲೈಸೆನ್ಸ್ ಪಡೆಯಬೇಕು
● ಅದಕ್ಕಾಗಿ ರಾಜ್ಯ ಅಬಕಾರಿ ಇಲಾಖೆ ಅಥವಾ ಜಿಲ್ಲಾ ಅಬಕಾರಿ ಇಲಾಖೆಗೆ ಭೇಟಿ ಅರ್ಜಿ ಸಲ್ಲಿಸಬೇಕು.
● ಯಾವ ಜಾಗದಲ್ಲಿ ಬಾರ್ ಪ್ರಾರಂಭಿಸುತ್ತೀರಿ ಆ ಜಾಗದ ಬಗ್ಗೆ ಮಾಹಿತಿ ಮತ್ತು ದಾಖಲೆ ನೀಡಬೇಕು
● ಅರ್ಜಿ ಶುಲ್ಕ ಪಾವತಿ ಮಾಡಬೇಕು
● ಅರ್ಜಿ ಸ್ವೀಕರಿಸಿದ ಮೇಲೆ ಇಲಾಖೆ ಕಡೆಯಿಂದ ಪರಿಶೀಲನೆ ಬರುತ್ತಾರೆ ಅಥವಾ ಪೊಲೀಸ್ ಇಲಾಖೆ ಸ್ಥಳ ತಪಾಸಣೆ ಮಾಡುತ್ತಾರೆ.
● ಈ ಮೇಲೆ ತಿಳಿಸಿದಂತೆ ಯಾವ ವಿಧದ ಬಾರ್ ಓಪನ್ ಮಾಡಲಿದ್ದೀರಾ ಅದರ ಆಧಾರಿತವಾಗಿ ನಿಗಧಿಯಾಗಿರುವ ಶುಲ್ಕ ಕಟ್ಟಬೇಕು.






ಅರ್ಜಿ ಜೊತೆ ಒದಗಿಸಬೇಕಾದ ದಾಖಲೆಗಳು
1. ಆಧಾರ್ ಕಾರ್ಡ್

2. ಐಡಿ ಕಾರ್ಡ್
3. ಅಡ್ರೆಸ್ ಪ್ರೂಫ್
4. ಬಾಡಿಗೆಗೆ ಶಾಪ್ ತೆಗೆದುಕೊಳ್ಳುವುದಾದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳು.
● ಎಲ್ಲಾ ದಾಖಲೆಗಳು ಸರಿ ಇದ್ದರೆ 10ರಿಂದ 15 ದಿನಗಳೊಳಗೆ ಲೈಸೆನ್ಸ್ ಸಿಗುತ್ತದೆ.



ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಬಿಡುಗಡೆ.! ಮೊದಲನೇ ಕಂತಿನ ಹಣ ಬಂದಿದೆಯೋ, ಇಲ್ಲವೋ ಈ ರೀತಿಯಾಗಿ ಸ್ಟೇಟಸ್ ಚೆಕ್ ಮಾಡಿ



ಅರ್ಜಿ ಸಲ್ಲಿಸಲು ಅರ್ಹತೆಗಳು:-

● ಭಾರತೀಯ ಪ್ರಜೆಯಾಗಿರಬೇಕು.
● 21 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.






ಬಾರ್ ನಡೆಸಲು ಹೊಂದಿರಬೇಕಾದ ದಾಖಲೆಗಳು:-

● ಬಾರ್ ಲೈಸನ್ಸ್
● ಎಸ್ಟಾಬ್ಲಿಷ್ಮೆಂಟ್ ಲೈಸೆನ್ಸ್
● ಪೋಲಿಸ್ ಹೌಸ್ ಲೈಸೆನ್ಸ್
● FSSAI ಲೈಸನ್ಸ್
● GST ಲೈಸೆನ್ಸ್
● ಮುನ್ಸಿಪಾಲಿಟಿ ಲೈಸೆನ್ಸ್








ಬೇಕಾಗುವ ಬಂಡವಾಳ:-

ಲೈಸೆನ್ಸ್ ಪಡೆಯಲು ಶುಲ್ಕ ಈ ರೀತಿ ಇರುತ್ತದೆ.
1. Cl1 ಬಾರ್ ರೂ. 5,75,000- 7,25,000
2. Cl2 ಬಾರ್ ಗೆ 4 – 5 ಲಕ್ಷ
3. Cl4 ಕ್ಲಬ್ ಬಾರ್ 5 – 6.5 ಲಕ್ಷ
4. Cl5 ಸೇಂದಿ ಲೈಸನ್ಸ್ ರೂ.50,000
5. Cl6a ಸ್ಟಾರ್ ಹೊಟೆಲ್ ಲೈಸೆನ್ಸ್ 10 ಲಕ್ಷ
6. Cl7 ಲೈಸೆನ್ಸ್ 6.5.ಲಕ್ಷ
7. Cl9 ಬಾರ್ ಎಂಡ್ ರೆಸ್ಟೋರೆಂಟ್ ಲೈಸೆನ್ಸ್ 7 ಲಕ್ಷ.
● ಇದರೊಂದಿಗೆ ಬಾರ್ ಇಂಟೀರಿಯರ್, ಡಿಸೈನ್, ಸ್ಟಾಕ್, ಕೆಲಸಗಾರರ ಸಂಬಳ ಹೀಗೆ ಒಟ್ಟಾರೆಯಾಗಿ ಅಂದಾಜು 50 ರಿಂದ 70 ಲಕ್ಷ ಖರ್ಚಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!

 

Post a Comment

0 Comments