ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು (Congress Government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಮೂಲಕ ಕರ್ನಾಟಕ ರಾಜ್ಯದಲ್ಲಿ ರೇಷನ್ ಕಾರ್ಡ್ ಹೊಂದಿ (Ration Card) ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯರು ಸರ್ಕಾರದಿಂದ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ರೂ.2,000 ಸಹಾಯಧನವನ್ನು ಪಡೆಯುತ್ತಿದ್ದಾರೆ.
ಇದುವರೆಗೂ ಕರ್ನಾಟಕ ರಾಜ್ಯದ 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು 90% ಮಹಿಳೆಯರು ಪ್ರತಿ ಹಣವನ್ನು ಕೂಡ ಪಡೆದಿದ್ದಾರೆ. ಈವರೆಗೆ ರೂ.2,000 ಸಿಗುತ್ತಿರುವ ಹಣವನ್ನು ಅದಕ್ಕಿಂತಲೂ ಹೆಚ್ಚಿಗೆ ಪಡೆಯುವ ಅವಕಾಶವನ್ನು ಸರ್ಕಾರ ನೀಡುತ್ತಿದೆ ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಮಹಿಳೆಯರಿಗಾಗಿ ಹೊಸ ಯೋಜನೆ.! ಗೆಳತಿ ಯೋಜನೆಯಡಿ 2.25 ಲಕ್ಷ ಸಂಪೂರ್ಣ ಉಚಿತ
ನೀಡಿರುವ ದಾಖಲೆಗಳಲ್ಲಿ ವ್ಯತ್ಯಾಸವಾಗಿರುವ ಕಾರಣ ಕೆಲವು ಮಹಿಳೆಯರನ್ನು ಹೊರತುಪಡಿಸಿ ಉಳಿದ ನೋಂದಾಯಿತ ಎಲ್ಲಾ ಮಹಿಳೆಯರು ಕೂಡ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ.2000 ಸಹಾಯಧನವನ್ನು ಪಡೆಯುತ್ತಿದ್ದಾರೆ.
ಕೆಲವರು ತಮ್ಮ ಕುಟುಂಬ ನಿರ್ವಹಣೆಗಾಗಿ ಈ ಹಣವನ್ನು ಬಳಸಿಕೊಂಡರೆ ಇನ್ನೂ ಕೆಲವರು ಹಣವನ್ನು ಕೂಡಿಟ್ಟು ಹೆಚ್ಚಿಗೆ ಮಾಡುವ ಚಿಂತನೆಯಲ್ಲಿದ್ದಾರೆ. ಆದರೆ ಈ ರೀತಿ ಸರ್ಕಾರದಿಂದ ಪಡೆದ ಹಣವನ್ನು ಉಳಿಸಿ ಇದನ್ನು ಹೆಚ್ಚಿಸಿಕೊಳ್ಳಲು ಅವರೇನಾದರೂ ಸ್ನೇಹಿತರು ಅಥವಾ ಸಂಬಂಧಿಕರಿಗೆ ಸಾಲ ನೀಡಲು ಮುಂದಾದರೆ ಬಹಳ ದೊಡ್ಡ ರಿಸ್ಕ್ ಇರುತ್ತದೆ.
ಯಾಕೆಂದರೆ ಸಾಲ ಪಡೆದುಕೊಂಡವರು ಹಣ ವಾಪಸ್ ನೀಡದೆ ಇದ್ದರೆ ನಿಮಗೆ ಸರ್ಕಾರದಿಂದ ಸಿಕ್ಕ ಹಣ ಸಿಗದೇ ಇದ್ದ ರೀತಿ ಆಗಿ ಹೋಗುತ್ತದೆ. ಹಾಗಾಗಿ ಈ ರೀತಿ ಖಾಸಗಿ ಅವರಿಗೆ ಸಾಲ ನೀಡುವುದು, ಚೀಟಿ ಹಾಕಿ ಮೋ’ಸ ಹೋಗುತ್ತಿರುವುದು ಇದನ್ನೆಲ್ಲ ತಪ್ಪಿಸಲು ಸರ್ಕಾರವು ಒಂದೊಳ್ಳೆ ಚಿಂತನೆ ಮಾಡಿ ಚಿಟ್ ಫಂಡ್ ಯೋಜನೆ (Chit fund Scheme) ಮೂಲಕ ತಾನೇ ಅವಕಾಶ ಮಾಡಿಕೊಡುತ್ತಿದೆ.
ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರು ಪಡೆಯುತ್ತಿರುವ ರೂ. 2000 ಹಣವನ್ನು ಚಿಟ್ ಫಂಡ್ ಯೋಜನೆ ಮೂಲಕ ಸರ್ಕಾರಕ್ಕೆ ವಾಪಸ್ ನೀಡಬಹುದು. ಇಂತಿಷ್ಟು ಅವಧಿ ಎನ್ನುವ ಮಿತಿ ಕೂಡ ಇರುತ್ತದೆ ಅವರು ಆರಿಸಿಕೊಂಡ ತಿಂಗಳಿಗೆ ಉದಾಹರಣೆಗೆ 20 ತಿಂಗಳು 30 ತಿಂಗಳು ಹೀಗೆ ಅವಧಿ ನಿರ್ಧರಿಸಿ ಹಣವನ್ನು ಸರ್ಕಾರಕ್ಕೆ ನೀಡಿದರೆ ಆ ಅವಧಿ ಮುಗಿದ ತಕ್ಷಣ ಬಡ್ಡಿ ಸಮೇತವಾಗಿ ಸರ್ಕಾರ ನಿಮಗೆ ಹೆಚ್ಚಿನ ಹಣ ನೀಡಲಿದೆ.
ಈ ಚಿಟ್ ಫಂಡ್ ಯೋಜನೆಯಲ್ಲಿ ರೂ 2000 ಮಾತ್ರವಲ್ಲದೆ ನೀವು ಉದ್ಯೋಗಸ್ಥ ಮಹಿಳೆಯಾಗಿದ್ದರೆ ಹೆಚ್ಚು ಹಣವನ್ನು ಕೂಡ ಹೂಡಿಕೆ ಮಾಡುವ ಅವಕಾಶ ಇದೆ. ಇಂತಹದೊಂದು ಅನುಕೂಲತೆಯನ್ನು ಆರ್ಥಿಕ ಭದ್ರತೆ ಜೊತೆ ಖಚಿತ ಲಾಭದ ಭರವಸೆ ನೀಡಿ ಸರ್ಕಾರ ನೀಡುತ್ತಿದೆ.
ರೈತರಿಗೆ ಬಂಪರ್ ನ್ಯೂಸ್ ಈ ಬ್ಯಾಂಕ್ ನಲ್ಲಿ ಸಾಲ ಮಾಡಿದ ರೈತರ ಸಾಲ ಮನ್ನಾ.! 440 ಕೋಟಿ ಬಡ್ಡಿ ಮನ್ನಾ
ನೆರೆಯ ರಾಜ್ಯವಾದ ಕೇರಳದಲ್ಲಿ ಸರ್ಕಾರ ತಂದಿರುವ ಈ ಚೀಟಿ ಯೋಜನೆಗಳು ಬಹಳ ಚೆನ್ನಾಗಿ ಅಲ್ಲಿನ ಜನತೆಗೆ ಅನುಕೂಲವಾಗುತ್ತಿದೆ. ಹಾಗಾಗಿ ನಮ್ಮ ರಾಜ್ಯದಲ್ಲೂ ಮಹಿಳೆಯರಿಗೆ ಈ ಅನುಕೂಲತೆ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿ ಇದೆ ಏಪ್ರಿಲ್ ತಿಂಗಳಲ್ಲಿ ಈ ಕುರಿತಾದ ಸಂಪೂರ್ಣ ವಿವರವನ್ನು ನೀಡಲಿದೆ.
ಸರ್ಕಾರದಲ್ಲಿ ಈ ರೀತಿಯ ಚಿಂತನೆ ನಡೆಯುತ್ತಿದೆ ಎನ್ನುವ ಮಾಹಿತಿಯು ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದರೆ ಮಹಿಳೆಯರಿಗೆ ರೂ.2000 ಹಣದ ಬದಲಿಗೆ ಹೆಚ್ಚಿಗೆ ಹಣವನ್ನು ಆ ತಿಂಗಳಿನಲ್ಲಿ ಸರ್ಕಾರದ ಪಡೆದ ರೀತಿ ಆಗುತ್ತದೆ.
0 Comments