ಇನ್ಮುಂದೆ ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ.! ನರೇಂದ್ರ ಮೋದಿ ಅವರಿಂದ ಹೊಸ ಘೋಷಣೆ

ಇನ್ಮುಂದೆ ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ.! ನರೇಂದ್ರ ಮೋದಿ ಅವರಿಂದ ಹೊಸ ಘೋಷಣೆ









 ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗಾಗಿ ಹಲವು ಯೋಜನೆಗಳನ್ನು (Government Schemes for Farmers) ಜಾರಿಗೆ ತಂದಿವೆ. ಇದರಲ್ಲಿ ರೈತನಿಗೆ ವಾರ್ಷಿಕವಾಗಿ ಮೂರು ಕಂತುಗಳಲ್ಲಿ ರೂ.6000 ಸಹಾಯಧನ ನೀಡುವಂತಹ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (PMKSY) ಹೆಚ್ಚು ಪ್ರಚಲಿತದಲ್ಲಿದೆ.



ಇದೇ ರೀತಿಯಾದ ಮತ್ತೊಂದು ಯೋಜನೆ ಕೂಡ 2019ರಲ್ಲಿಯೇ ಜಾರಿಗೆ ಬಂದಿತು. ಈ ಯೋಜನೆ ಹೆಸರು ಕಿಸಾನ್ ಮನ್ ಧನ್ ಯೋಜನೆ(Kisan Mandhan Yojane). ಈ ಕಿಸಾನ್ ಮನ್ ಧನ್ ಯೋಜನೆ ಮೂಲಕ ಸಣ್ಣ ರೈತನು ಪ್ರತಿ ತಿಂಗಳು ಪಿಂಚಣಿ (Pension Scheme) ಪಡೆಯಬಹುದು. ಈ ಯೋಜನೆ ಕುರಿತಾದ ಮಾಹಿತಿ ಹೀಗಿದೆ ನೋಡಿ







ಯೋಜನೆಯ ಹೆಸರು:- ಪ್ರಧಾನಮಂತ್ರಿ ಕಿಸಾನ್ ಮನ್ ಧನ್ ಯೋಜನೆ(PM Kisan Mandhan Scheme)

* ಈ ಯೋಜನೆಯ ಪ್ರಮುಖ ಆಕರ್ಷಣೆ ಏನೆಂದರೆ, 60 ವರ್ಷ ವಯಸ್ಸಾದ ನಂತರ ಪ್ರತಿ ತಿಂಗಳು ಕೂಡ ನೋಂದಾಯಿತ ರೈತನು ಈ ಯೋಜನೆಯಡಿ ಕನಿಷ್ಠ ರೂ.3,000 ವರೆಗೆ ಪಿಂಚಣಿ ಪಡೆಯಬಹುದು.



ಗೃಹಲಕ್ಷ್ಮಿ ಯೋಜನೆ ಹಣ ಪಡೆಯುತ್ತಿರುವ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ಮುಂದೆ 2000 ಅಲ್ಲ 4000 ಹಣ ನೀಡಲು ನಿರ್ಧರಿಸಿರುವ ಸರ್ಕಾರ, ತಪ್ಪದೇ ಈ ಕೆಲಸ ಮಾಡಿ






* ಗರಿಷ್ಠ 2 ಹೆಕ್ಟರ್ ಅಥವಾ 5 ಎಕರೆ ಕೃಷಿಭೂಮಿ ಹೊಂದಿರುವ ರೈತನಷ್ಟೇ ಈ ಯೋಜನೆಗೆ ಅರ್ಹ

* ಈ ಯೋಜನೆ ಖರೀದಿಸುವ ರೈತನ ವಯಸ್ಸು 18 ವರ್ಷ ಮೇಲ್ಪಟ್ಟು 40 ವರ್ಷ ವಯಸ್ಸಿನ ಒಳಗಿರಬೇಕು

* ಈ ಯೋಜನೆಗೆ ಪ್ರತಿ ತಿಂಗಳು ರೈತನು ಕನಿಷ್ಠ 55 ರೂಪಾಯಿ ಇಂದ 200 ರೂವರೆಗೆ ಹಣ ಹೂಡಿಕೆ ಮಾಡುತ್ತಾ ಹೋಗಬೇಕು, ಕೇಂದ್ರ ಸರ್ಕಾರವು ಕೂಡ ರೈತನ ಹೆಸರಿನಲ್ಲಿ ಇಷ್ಟೇ ಮೊತ್ತದ ಹಣವನ್ನು ಪಿಂಚಣಿ ನಿಧಿಗೆ ನೀಡುತ್ತದೆ. ಈ ಹಣವನ್ನು ರೈತನಿಗೆ 60 ವರ್ಷ ಆದ ಬಳಿಕ ಪ್ರತಿ ತಿಂಗಳು ಆತ ಉಳಿಸಿದ್ದ ಹಣದ ಆಧಾರದ ಮೇಲೆ ಗರಿಷ್ಠ ರೂ.3,000 ದವರೆಗೆ ಪಿಂಚಣಿ ರೂಪದಲ್ಲಿ ನೀಡುತ್ತದೆ.






* ನೀವೇನಾದರೂ 18 ವರ್ಷ ವಯಸ್ಸಿಗೆ ಪಿಎಂ ಕಿಸಾನ್ ಮನ್ ಧನ್ ಯೋಜನೆ ಖರೀದಿಸಿದರೆ ನೀವು ಪ್ರತಿ ತಿಂಗಳು ಪಾವತಿ ಮಾಡಬೇಕಾದ ಪ್ರೀಮಿಯಂ ಮೊತ್ತ ರೂ. 55 ಇರುತ್ತದೆ, ನೀವೇನಾದರೂ 40ನೇ ವಯಸ್ಸಿನಲ್ಲಿ ಈ ಯೋಜನೆ ಖರೀದಿಸಿದರೆ ಪಾವತಿ ಮಾಡಬೇಕಾದ ಪ್ರೀಮಿಯ ಮೊತ್ತ ರೂ.200 ಇರುತ್ತದೆ.



ಮಹಿಳೆಯರಿಗಾಗಿ ಹೊಸ ಯೋಜನೆ.! ಗೆಳತಿ ಯೋಜನೆಯಡಿ 2.25 ಲಕ್ಷ ಸಂಪೂರ್ಣ ಉಚಿತ




* ನಾಮಿನಿ ಫೆಸಿಲಿಟಿ ಕೂಡ ಲಭ್ಯವಿರುತ್ತದೆ

* ಪೆನ್ಷನ್ ಪಡೆಯುವುದಕ್ಕಿಂತ ಮುಂಚೆ ರೈತ ಒಂದು ವೇಳೆ ಮೃ’ತ ಪಟ್ಟಲ್ಲಿ ಆತ ಸೂಚಿಸಿದ ನಾಮಿನಿಗೆ ಕಾನೂನು ಬದ್ಧವಾಗಿ ಸೇರಬೇಕಾದ ಹಣ ಹೋಗುತ್ತದೆ. ಪೆನ್ಷನ್ ಪಡೆಯುವ ಸಮಯದಲ್ಲಿ ಮೃ’ತಪಟ್ಟರೆ ರೈತನ ಪತ್ನಿಗೆ ಕೂಡ ಗರಿಷ್ಠ ರೂ.1500 ಪ್ರತಿ ತಿಂಗಳು ಪಿಂಚಣಿ ಬರುತ್ತದೆ. ಅವರ ನಂತರ ನಾಮಿನಿಗೆ ಹೂಡಿಕೆ ಹಣ ಹೋಗುತ್ತದೆ.







ಯೋಜನೆ ಖರೀದಿಸುವುದು ಹೇಗೆಂದರೆ, ರೈತರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ವಿವರ ಮತ್ತು ಜಮೀನಿನ ಪಹಣಿ ಪತ್ರ ಸೇರಿದಂತೆ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು, ರೈತನ ವಯಸ್ಸಿಗೆ ಅನುಗುಣವಾಗಿ ಪ್ರತಿ ತಿಂಗಳು ಎಷ್ಟು ಪ್ರೀಮಿಯಂ ಪಾವತಿಸಬೇಕು ಎಂದು ನಿರ್ದಿಷ್ಟ ಪಡಿಸುತ್ತಾರೆ.







ಇದರಲ್ಲಿ ಮೊದಲನೇ ಕಂತಿನ ಹಣವನ್ನು ನಗದ ರೂಪದಲ್ಲಿ ಪಾವತಿ ಮಾಡಿದರೆ ನಂತರದ ಹಣವು ಅದರ ಬ್ಯಾಂಕ್ ಖಾತೆಯಿಂದ ಆಟೋ ಡಿಟೆಕ್ಟ್ (Auto Detect) ಆಗುತ್ತಿರುತ್ತದೆ ಗ್ರಾಮ ಹಂತದ ಉದ್ಯಮದಾರ ಈ ಪ್ರಕ್ರಿಯೆಗೆ ಸಹಾಯ ಮಾಡುತ್ತಾರೆ.


Post a Comment

0 Comments