ವಿದ್ಯಾಭಾಸದ ಕಾರಣಕ್ಕಾಗಿ ಅಥವಾ ಉದ್ಯೋಗದ ಕಾರಣಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಈ ರೀತಿ ಬರುವ ಹೆಣ್ಣು ಮಕ್ಕಳಲ್ಲಿ ಅನೇಕರು ಬಡ ಕುಟುಂಬದಿಂದ ಬಂದವರು ಆಗಿರುತ್ತಾರೆ ಇವರಿಗೆ ಹೊಸ ಜಾಗದಲ್ಲಿ ವಸತಿ ಮತ್ತು ಊಟದ ವ್ಯವಸ್ಥೆಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ.
ಇನ್ನು ಉದ್ಯೋಗದ ಸಲುವಾಗಿ ಬರುವಂತಹ ಮಕ್ಕಳಿರುವ ಮಹಿಳೆಯರಿಗೂ ಕೂಡ ಮಕ್ಕಳ ಕಾಳಜಿ ಜೊತೆ ಸುರಕ್ಷತೆ ಮತ್ತು ಆ ಸಮಯಕ್ಕೆ ಸೂಕ್ತವಾದ ಎಲ್ಲ ಸೌಲಭ್ಯಗಳಿರುವ ವ್ಯವಸ್ಥೆ ಹುಡುಕುವುದೇ ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. ಇದನ್ನು ಪರಿಹರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಹಿಂದೆಯೇ ಸಖಿ ನಿವಾಸ ವಸತಿ ಯೋಜನೆ (Sakhi Nivasa Vasathi Yojane) ಎನ್ನುವ ಯೋಜನೆಯನ್ನು ಜಾರಿಗೆ ತಂದಿತ್ತು.
ಇನ್ಮುಂದೆ ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ.! ನರೇಂದ್ರ ಮೋದಿ ಅವರಿಂದ ಹೊಸ ಘೋಷಣೆ.
ಈ ಯೋಜನೆ ಮೂಲಕ ಮಕ್ಕಳಿರುವ ಉದ್ಯೋಗಸ್ಥ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಬಹಳ ಅನುಕೂಲವಾಗುತ್ತಿತ್ತು ಈ ಯೋಜನೆ ಮತ್ತೊಮ್ಮೆ ಚರ್ಚೆಯಲ್ಲಿದೆ. 1972-73 ರಲ್ಲಿ ಸಖಿ ನಿವಾಸ ವಸತಿ ಯೋಜನೆ ಆರಂಭವಾಗಿತ್ತು, ಆ ಕಾಲಘಟ್ಟದಲ್ಲಿ ಪ್ರಾರಂಭಿಕವಾಗಿ ನಗರ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಹಾಗೂ ವಸತಿ ಸೌಲಭ್ಯವನ್ನು ಒದಗಿಸುವ ಸಲುವಾಗಿ ಬಾಡಿಗೆ ಜಾಗಗಳಲ್ಲಿ ಕಟ್ಟಗಳನ್ನು ನಿರ್ಮಿಸಿ ಹಾಸ್ಟೆಲ್ ನಡೆಸುವ ಯೋಜನೆಯಾಗಿತ್ತು.
ಕಳೆದೆರಡು ವರ್ಷಗಳ ಹಿಂದೆ 2022 ಏಪ್ರಿಲ್ 1ರಿಂದ ಇದೇ ಯೋಜನೆಯನ್ನು ಸ್ವಲ್ಪ ತಿದ್ದುಪಡಿ ಮಾಡಿ ಭಾರತದ ಪ್ರಮುಖ ನಗರ ಪ್ರದೇಶಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಚಿಂತಿಸಲಾಯಿತು.
ಯೋಜನೆ ಉದ್ದೇಶದಂತೆ ಪ್ರಮುಖ ನಗರ ಪ್ರದೇಶಗಳಲ್ಲಿ ಹಾಸ್ಟೆಲ್ ಗಳನ್ನು ನಿರ್ಮಿಸಿ ವಿದ್ಯಾರ್ಥಿನಿಯರಿಗೆ ಹಾಗೂ ಉದ್ಯೋಗಸ್ಥ ಚಿಕ್ಕ ಮಕ್ಕಳನ್ನು ಹೊಂದಿರುವ ತಾಯಿಯರಿಗೆ ಮತ್ತು ಕೆಲವು ಕಂಡಿಶನ್ ಮೇರೆಗೆ ಅವಿವಾಹಿತ ಹೆಣ್ಣು ಮಕ್ಕಳಿಗೂ ಉಳಿದುಕೊಳ್ಳಲು ಆಶ್ರಯದ ಅವಕಾಶ ನೀಡಲಾಗುತ್ತಿತ್ತು.
ಗೃಹಲಕ್ಷ್ಮಿ ಯೋಜನೆ ಹಣ ಪಡೆಯುತ್ತಿರುವ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ಮುಂದೆ 2000 ಅಲ್ಲ 4000 ಹಣ ನೀಡಲು ನಿರ್ಧರಿಸಿರುವ ಸರ್ಕಾರ, ತಪ್ಪದೇ ಈ ಕೆಲಸ ಮಾಡಿ
ಇಂತಹ ವ್ಯವಸ್ಥೆಯನ್ನು ವರ್ಕಿಂಗ್ ವುಮೆನ್ ಹಾಸ್ಟೆಲ್ (Working Women Hostel) ಎಂದು ಕೂಡ ಕರೆಯಲಾಗುತ್ತದೆ. ಕಡಿಮೆ ದರದ ಬಾಡಿಗೆ ಮತ್ತು ಊಟದ ವ್ಯವಸ್ಥೆ, ಸುರಕ್ಷತೆ ಹಾಗೂ ಮಕ್ಕಳಿಗೆ ಡೇ ಕೇರ್ ನಂತಹ ಸೌಲಭ್ಯದ ಉಳಿದುಕೊಳ್ಳುವಂತಹ ಎಲ್ಲರಿಗೂ ಮನೆಯ ವಾತಾವರಣ ನಿರ್ಮಿಸುವುದು ಈ ಯೋಜನೆಯ ವಿಶೇಷತೆಯಾಗಿದೆ.
ಈಗ ಈ ರೀತಿಯ ಹಾಸ್ಟೆಲ್ ಗಳ ಸಂಖ್ಯೆ ಹೆಚ್ಚಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು (Women and Child Wellfare Ministry) ವಿಶ್ವವಿದ್ಯಾಲಯಗಳ ಆವರಣದಲ್ಲಿ ಈ ವರ್ಕಿಂಗ್ ವುಮೆನ್ ಹಾಸ್ಟೆಲ್ ಗಳನ್ನು ನಿರ್ಮಿಸಲು ಸೂಕ್ತವಾದ ಜಾಗ ಘೋಷಿಸುವಂತೆ ವಿಶ್ವವಿದ್ಯಾಲಯದ ಧನಸಹಾಯ ಆಯೋಗಕ್ಕೆ (UCG) ಗೆ ಸೂಚನೆ ನೀಡಿದೆ.
ವಿಶ್ವವಿದ್ಯಾಲಯಗಳು ಜಾಗ ನೀಡಿದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ಮಾಣ ಹಾಗೂ ನಿರ್ವಹಣೆ ವೆಚ್ಚವನ್ನು ಪರಿಸಲಿದೆ. ಈಗಿನ ದಿನಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಮಹಿಳೆಯ ತೊಡಗಿಕೊಳ್ಳುವಿಕೆ ಹೆಚ್ಚಾಗಿದೆ.
ಅದರಲ್ಲಿ ಈ ರೀತಿ ವಸತಿ ಸೌಲಭ್ಯಗಳು ಮಹಿಳೆಯರ ತೊಡಗಿಕೊಳ್ಳುವಿಕೆಗೆ ಇನ್ನಷ್ಟು ಪ್ರೋತ್ಸಾಹ ನೀಡುತ್ತವೆ ಎನ್ನುವುದು ಕೂಡ ಸತ್ಯವಾದ ಮಾತು. ಹೀಗಾಗಿ ವರ್ಷದಿಂದ ವರ್ಷಕ್ಕೆ ಮಹಿಳಾ ಉದ್ಯೋಗಸ್ಥರ ಸಂಖ್ಯೆ ಹೆಚ್ಚಾಗುತ್ತಿದೆ ಇಂತಹ ಮಹಿಳೆಯರಿಗೆ ಈ ಯೋಜನೆಗಳು ಅಪರಿಮಿತ ನೆರವನ್ನು ನೀಡುತ್ತಿವೆ.
ಸಖಿ ನಿವಾಸ ವಸತಿ ಯೋಜನೆಯಡಿ ಯಾರೆಲ್ಲಾ ಪ್ರಯೋಜನ ಪಡೆಯಬಹುದು:-
* ವಿದ್ಯಾರ್ಥಿನಿಯರು
* ವಿ-ಚ್ಛೇದಿತ, ಅವಿವಾಹಿತ ಹೆಣ್ಣು ಮಕ್ಕಳು, ವಿಧವೆಯರು
* 18 ವರ್ಷದ ಒಳಗಿನ ಹೆಣ್ಣು ಮಕ್ಕಳು ಜೊತೆ ಆಕೆಯ ತಾಯಿ
* 12 ವರ್ಷದ ಗಂಡು ಮಕ್ಕಳ ಜೊತೆ ಅವರ ತಾಯಿ
* ವಿಕಲಾಂಗ ಮಹಿಳೆಯರಿಗೆ ವಿಶೇಷ ಆದ್ಯತೆ ಇರುತ್ತದೆ.
0 Comments