ಸೇನೆ ಸೇರುವ ಆಸಕ್ತಿ ಹೊಂದಿರುವವರಿಗೆಲ್ಲ ಮತ್ತೊಂದು ಅವಕಾಶ ಸಿಗುತ್ತದೆ. ಭಾರತೀಯ ವಾಯುಪಡೆ (Indian Air Force) ಅಗ್ನಿವೀರ್ ನೇಮಕಾತಿ 2024 (Agniveer Recruitment 2024) ಬಗ್ಗೆ ಅಧಿಸೂಚನೆಯೊಂದನ್ನು ಹೊರಡಿಸಿದೆ. ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಭಾರತೀಯ ವಾಯುಪಡೆಯಲ್ಲಿ ವೃತ್ತಿಜೀವನವನ್ನು ಶುರು ಮಾಡಲು ಇದೊಂದು ಉತ್ತಮ ಅವಕಾಶವಾಗಿದ್ದು.
ಸೇನೆ ಸೇರ ಬಯಸುವಂತಹ ಅಭ್ಯರ್ಥಿಗಳು ತಪ್ಪದೇ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ನೇಮಕಾತಿಗೆ ಸಂಬಂಧಿಸಿದ ಹಾಗೆ ಇರುವ ಪ್ರಮುಖ ಮಾಹಿತಿಗಳಾದ ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು, ವೇತನ ಶ್ರೇಣಿ, ಉದ್ಯೋಗ ಸ್ಥಳ, ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.
ಮಹಿಳೆಯರಿಗೆ ಸಖಿ ನಿವಾಸ ವಸತಿ ಯೋಜನೆ.! ಯಾರಿಗೆಲ್ಲಾ ಈ ಯೋಜನೆಯ ಪ್ರಯೋಜನ ಸಿಗಲಿದೆ ನೋಡಿ
ನೇಮಕಾತಿ ಸಂಸ್ಥೆ:- ಭಾರತೀಯ ವಾಯುಪಡೆ
ಒಟ್ಟು ಹುದ್ದೆಗಳ ಸಂಖ್ಯೆ:- 3,500 ಹುದ್ದೆಗಳು
ಹುದ್ದೆಗಳ ವಿವರ:- ಅಗ್ನಿವೀರ್
ಉದ್ಯೋಗ ಸ್ಥಳ:- ಭಾರತದಾದ್ಯಂತ…
ವೇತನ ಶ್ರೇಣಿ:- ಅಗ್ನಿವೀರ್ ಆಗಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ರೂ.21,000 ಮಾಸಿಕವಾಗಿ ನೀಡಲಾಗುತ್ತದೆ ಮತ್ತು ಇದು ವಾರ್ಷಿಕವಾಗಿ ಹೆಚ್ಚಾಗುತ್ತದೆ.
* ಇದರೊಂದಿಗೆ ಸೇವೆಯನ್ನು ಪೂರ್ಣಗೊಳಿಸಿದ ನಂತರ ಸೇವಾ ನಿಧಿ ಪ್ಯಾಕೇಜ್ ರೂ.10,04,000 ನೀಡಲಾಗುತ್ತದೆ.
ಇನ್ಮುಂದೆ ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ.! ನರೇಂದ್ರ ಮೋದಿ ಅವರಿಂದ ಹೊಸ ಘೋಷಣೆ.
ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಅರ್ಹತೆಗಳು:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ವ್ಯಾಸಂಗ ಪೂರ್ತಿ ಗೊಳಿಸಿರಬೇಕು, 10ನೇ ತರಗತಿ ಮೇಲ್ಪಟ್ಟು PUC, ಪದವಿ, ಸ್ನಾತಕೋತ್ತರ ಪದವಿ, ITI, ಡಿಪ್ಲೋಮೋ ಮಾಡಿದವರು ಅರ್ಜಿ ಸಲ್ಲಿಸಬಹುದು.
* ಭಾರತೀಯ ನಾಗರೀಕನಾಗಿರಬೇಕು.
* ಅಧಿಸೂಚನೆಯಲ್ಲಿ ನಿಗದಿಪಡಿಸಿರುವಂತಹ ತೂಕ ಹಾಗೂ ಎತ್ತರ ಹೊಂದಿರಬೇಕು ಇದಕ್ಕೂ ಸಹ ಪರೀಕ್ಷೆ ನಡೆಸಲಾಗುತ್ತದೆ.
* ಕನಿಷ್ಠ 17.5 ವರ್ಷ ಪೂರ್ತಿಗೊಂಡಿರಬೇಕು, ಗರಿಷ್ಠ 21 ವರ್ಷಗಳು
ಅರ್ಜಿ ಶುಲ್ಕ:-
* ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ
* ಇತರ ಅಭ್ಯರ್ಥಿಗಳಿಗೆ ರೂ.550
ಅರ್ಜಿ ಸಲ್ಲಿಸುವ ವಿಧಾನ:-
* ಮೊದಲಿಗೆ https://agnipathvayu.cdac.in/ ವೆಬ್ ಸೈಟ್ ಗೆ ಭೇಟಿ ಕೊಟ್ಟು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಓದಿ ಅರ್ಥೈಸಿಕೊಳ್ಳಿ
* ಅಧಿಸೂಚನೆಯಲ್ಲಿ ಕೇಳಿರುವ ಅರ್ಹತಾ ಮಾನದಂಡಗಳನ್ನು ಪೂರೈಸುವವರಾದರೆ ಅರ್ಜಿ ಸಲ್ಲಿಸಲು ಇರುವ ಲಿಂಕ್ ಕ್ಲಿಕ್ ಮಾಡಿ ಮುಂದುವರೆಯಿರಿ
* ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಕೇಳಿರುವ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿ ಶುಲ್ಕ ಪಾವತಿ ಮಾಡಿ ನಂತರ ಅದರ ವಿವರಗಳನ್ನು ಕೂಡ ಸರಿಯಾಗಿ ಭರ್ತಿ ಮಾಡಿ
ಆಯ್ಕೆ ವಿಧಾನ:-
* ಆನ್‌ಲೈನ್ ಲಿಖಿತ ಪರೀಕ್ಷೆ
* ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಹೊಂದಿಕೊಳ್ಳುವಿಕೆ ಪರೀಕ್ಷೆ
* ವೈದ್ಯಕೀಯ ಪರೀಕ್ಷೆ
* ಸಂದರ್ಶನ
* ದಾಖಲೆಗಳ ಪರಿಶೀಲನೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – 17 ಜನವರಿ 2024
* ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ – 06 ಫೆಬ್ರವರಿ 2024
ಬೇಕಾಗುವ ದಾಖಲೆಗಳು:-
* ಇತ್ತೀಚಿನ ಭಾವಚಿತ್ರ ಮತ್ತು ಸಹಿ
* ಚಾಲ್ತಿಯಲ್ಲಿರುವ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ
* ಆಧಾರ್ ಕಾರ್ಡ್
* ಶೈಕ್ಷಣಿಕ ಅಂಕ ಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
* ನಿವಾಸ ಪುರಾವೆ ಮತ್ತು ಇನ್ನಿತರ ಯಾವುದೇ ಪ್ರಮುಖ ದಾಖಲೆಗಳು.
0 Comments