ಫ್ರಾಂಚೈಸಿ ಬಿಸಿನೆಸ್ ಮಾಡುವುದರಿಂದ ಕೂಡ ಹೆಚ್ಚು ಲಾಭ ಪಡೆಯಬಹುದು, ಅದರಲ್ಲೂ ಬಿಸಿಲೆರಿ ವಾಟರ್ ಫ್ರಾಂಚೈಸಿ ಬಿಸಿನೆಸ್ ಕೈ ತುಂಬ ಆದಾಯ ತರುತ್ತದೆ. ಇದರ ಬಗ್ಗೆ ನಾವು ಕೆಲ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇವೆ. ಬಿಸಿಲೆರಿ ಬ್ರಾಂಡ್ ಈಗಾಗಲೇ ಹೆಸರುವಾಸಿಗೆಯಾಗಿರುವುದರಿಂದ ಈ ಫ್ರಾಂಚೈಸಿ ಪಡೆದುಕೊಂಡರೆ ಒಳ್ಳೆ ಲಾಭ ಬರುವುದು ಗ್ಯಾರೆಂಟಿ.
ಬಿಸಿಲೆರಿ ವಾಟರ್ ಬಾಟಲ್ ಕಂಪನಿ ಬಗ್ಗೆ ಹೇಳುವುದಾದರೆ ದೇಶದಾದ್ಯಂತ 122 ಪ್ಲಾಂಟ್ ಗಳು ಇವೆ. ಇದರಲ್ಲಿ 13 ಪ್ಲಾಂಟ್ ಗಳನ್ನು ಮಾತ್ರ ಕಂಪನಿ ಸ್ವಂತವಾಗಿ ನಡೆಸುತ್ತಿದೆ. ದೇಶದಲ್ಲಿ 4500 ಡಿಸ್ಟ್ರಿಬ್ಯೂಟರ್ 5000 ಟ್ರಕ್ ಗಳನ್ನು ಹೊಂದಿದೆ.
ಬಿಸಿಲಿರಿ ಕಂಪನಿಯ ಧ್ಯೇಯ ಏನೆಂದರೆ ದೇಶದ ಪ್ರತಿಯೊಂದು ಗ್ರಾಮ, ಪಟ್ಟಣ, ನಗರಕ್ಕೂ ಕೂಡ ವಾಟರ್ ಸಪ್ಲೈ ಮಾಡಬೇಕು ಎನ್ನುವುದು. ಹೀಗಾಗಿ ವಾಟರ್ ಬಾಟಲ್ ಫ್ರಾಂಚೈಸಿ ಡೀಲರ್ ಶಿಪ್ ಕೊಡುವುದು ಅನಿವಾರ್ಯ. ಇಂತಹ ಸದಾವಕಾಶವನ್ನು ಉಪಯೋಗಿಸಿಕೊಂಡರೆ ನಿಮ್ಮ ಬದುಕಿಗೆ ದಾರಿಯಾಗುತ್ತದೆ.
ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಜಮೆ ಆಗಿದೆಯೇ ಇಲ್ಲವೇ ಎನ್ನುವುದನ್ನು ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ, ಈ ವಿಧಾನದಲ್ಲಿ ಚೆಕ್ ಮಾಡಿ
ಈ ಬಿಸಿನೆಸ್ ಮಾಡುವುದು ಹೇಗೆ? ಎಷ್ಟು ಬಂಡವಾಳ ಬೇಕಾಗಬಹುದು? ಎಷ್ಟು ಜಾಗ ಬೇಕಾಗುತ್ತದೆ? ಏನೆಲ್ಲಾ ಮೆಟೀರಿಯಲ್ ಬೇಕು ಇದೆಲ್ಲ ವಿಚಾರವನ್ನು ತಿಳಿದುಕೊಂಡು ಇದರ ಡೀಲರ್ ಶಿಪ್ ತೆಗೆದುಕೊಳ್ಳುವುದರ ಬಗ್ಗೆ ಪ್ರಯತ್ನ ಪಡಬೇಕು ಹಾಗಾಗಿ ಆಸಕ್ತರಿಗೆ ಒಂದಿಷ್ಟು ಮಾಹಿತಿ ತಿಳಿಸುತ್ತಿದ್ದೇವೆ.
ನೀವು ಯಾವ ಜಾಗದಲ್ಲಿ ಇದನ್ನು ಫ್ರಾಂಚೈಸಿ ಓಪನ್ ಮಾಡುತ್ತೀರಾ ಮತ್ತು ಚಿಕ್ಕದಾಗಿ ಅಥವಾ ದೊಡ್ಡದಾಗಿ ಪ್ಲಾನ್ ಮಾಡುತ್ತಿದ್ದೀರಾ ಎನ್ನುವುದರ ಮೇಲೆ ಇದಕ್ಕೆ ಬೇಕಾದ ಇನ್ವೆಸ್ಟ್ಮೆಂಟ್ ಹಾಗೂ ಲಾಭ ನಿರ್ಧಾರವಾಗುತ್ತದೆ ಇದಕ್ಕಾಗಿ ಒಂದು ಆಫೀಸ್ ಅಥವಾ ಗೋಡಾನ್ ಬೇಕಾಗುತ್ತದೆ, ಅದರ ಮುಂದೆ ಸ್ವಲ್ಪ ಖಾಲಿ ಜಾಗವೂ ಬೇಕಾಗುತ್ತದೆ.
ಕೃಷಿ ಉಪಕರಣ ಖರೀದಿಸಲು ಸರ್ಕಾರದಿಂದ ಶೇಕಡಾ 90% ಸಬ್ಸಿಡಿ
ಯಾಕೆಂದರೆ ಲೋಡಿಂಗ್ ಅನ್ ಲೋಡಿಂಗ್ ಮಾಡಲು ಬರುವ ವೆಹಿಕಲ್ ನಿಲ್ಲಿಸಲು ಪಾರ್ಕಿಂಗ್ ಸ್ಪೇಸ್ ಬೇಕಾಗುತ್ತದೆ. ಆಫೀಸ್ ಆದರೆ 150 – 200 Sq.ft, ಗೋಡಾನ್ ಆದರೆ 1500 – 2000 Sq.ft ಜಾಗ ಬೇಕಾಗುತ್ತದೆ, ಅಡಿಷನಲ್ ಸ್ಪೇಸ್ 200 – 300Sq.ft ಬೇಕು.
ಫ್ರಾಂಚೈಸಿ ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು:-
* ಐಡಿ ಪ್ರೂಫ್ ಆಗಿ ಆಧಾರ್ ಕಾರ್ಡ್
* ಬ್ಯಾಂಕ್ ಅಕೌಂಟ್ ಡೀಟೇಲ್ಸ್
* GST ನಂಬರ್
* NOS ಸರ್ಟಿಫಿಕೇಟ್
* ಆಫೀಸ್ ಅಥವಾ ಗೋಡಾನ್ ಗೆ ಸಂಬಂಧಿಸಿದ ರೆಂಟ್ ಅಗ್ರಿಮೆಂಟ್
ರೈಲ್ವೆ ಪೊಲೀಸ್ ಇಲಾಖೆಯಲ್ಲಿ 4660 ಹುದ್ದೆಗಳ ಬೃಹತ್ ನೇಮಕಾತಿ. 10ನೆ ತರಗತಿ, PUC, ಪದವಿ ಆದವರು ಅರ್ಜಿ ಸಲ್ಲಿಸಿ ವೇತನ 35400
ಮಾರ್ಕೆಟಿಂಗ್ ಹಾಗೂ ಒಳ್ಳೆಯ ಕಮ್ಯುನಿಕೇಷನ್ ಸ್ಕಿಲ್ ಇರುವ ಯಾರು ಬೇಕಾದರೂ ಈ ಫ್ರಾಂಚೈಸಿ ಪಡೆದುಕೊಳ್ಳಬಹುದು. ನೀವು ಯಾರಾದರೂ ವರ್ಕರ್ ಸೆಲೆಕ್ಟ್ ಮಾಡುವುದಾದರೂ ಈ ರೀತಿ ಚೆನ್ನಾಗಿ ಮಾರ್ಕೆಟಿಂಗ್ ಮಾಡಲು ಗೊತ್ತಿರುವವರನ್ನು ಸೆಲೆಕ್ಟ್ ಮಾಡಿಕೊಂಡರೆ ಚೆನ್ನಾಗಿ ಬಿಸಿನೆಸ್ ನಡೆಯುತ್ತದೆ.
ಇನ್ನು ಈ ಬಿಸಿನೆಸ್ ಮಾಡುವುದಕ್ಕೆ ಬಂಡವಾಳ ಬೇಕೇ ಬೇಕು ಬಂಡವಾಳದ ವಿಚಾರದ ಬಗ್ಗೆ ಮಾತನಾಡುವುದಾದರೆ ನೀವು ಫ್ರಾಂಚೈಸಿ ತೆಗೆದುಕೊಳ್ಳಲು ಕಂಪನಿಗೆ 2 ರಿಂದ 4 ಲಕ್ಷದವರೆಗೆ ಹಣ ಕಟ್ಟಬೇಕು. ಲಾಭದ ಬಗ್ಗೆ ಹೇಳುವುದಾದರೆ ಇದು ನಿಮ್ಮ ಮಾರ್ಕೆಟಿಂಗ್ ಸ್ಕಿಲ್ಸ್ ಮೇಲೆ ಡಿಪೆಂಡ್ ಆಗುತ್ತದೆ.
ನೀವು ಎಷ್ಟು ಚೆನ್ನಾಗಿ ಮಾರ್ಕೆಟಿಂಗ್ ಮಾಡುತ್ತೀರಾ ಹಾಗೂ ಗ್ರಾಹಕರು ನಿಮಗೆ ಹೇಗೆ ರೆಸ್ಪಾನ್ಸ್ ಮಾಡುತ್ತಾರೆ ಎನ್ನುವುದರ ಮೇಲೆ ಇದು ನಿರ್ಧಾರ ಆಗುತ್ತದೆ ಆದರೂ ಜನರಲ್ ಆಗಿ ಕಂಪನಿಯ ಮಾರ್ಜಿನ್ ಬಗ್ಗೆ ಹೇಳುವುದಾದರೆ ಒಂದು ಬಾಕ್ಸ್ ಮೇಲೆ ನಿಮಗೆ 10% ಪ್ರಾಫಿಟ್ ಮಾರ್ಜಿನ್ ಇರುತ್ತದೆ.
ಆಸಕ್ತಿ ಇದ್ದವರು ಹೆಚ್ಚಿನ ಮಾಹಿತಿಗಾಗಿ ಮತ್ತು ಡೀಲರ್ ಶಿಪ್ ಗಾಗಿ ಕಂಪನಿಯ ಈ ವೆಬ್ಸೈಟ್ ವಿಳಾಸಕ್ಕೆ ಭೇಟಿ ಕೊಡಿ:-
https://www.bisleri.com/distributor
0 Comments