ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯಲ್ಲಿ (KBOCWWB) ನೋಂದಾಯಿತರಾಗಿ ಲೇಬರ್ ಕಾರ್ಡ್ (Labour Card) ಹೊಂದಿರುವಂತಹ ಕಾರ್ಮಿಕರುಗಳಿಗೆ (Lobours) ಕರ್ನಾಟಕ ಸರ್ಕಾರದ ವತಿಯಿಂದ ಅನೇಕ ಕಲ್ಯಾಣ ಯೋಜನೆಗಳ (Government Schemes) ನೆರವು ಸಿಗುತ್ತಿದೆ.
ಕಾರ್ಮಿಕರು ಮಾತ್ರವಲ್ಲದೆ ಕಾರ್ಮಿಕರ ಕುಟುಂಬ ಕೂಡ ಇದರ ಪ್ರಯೋಜನವನ್ನು ಪಡೆಯಬಹುದು ಕಾರ್ಮಿಕಳ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಹೆರಿಗೆ ಸೌಲಭ್ಯ, ವೈದ್ಯಕೀಯ ಖರ್ಚು ವೆಚ್ಚಗಳಲ್ಲಿ ರಿಯಾಯಿತಿ, ಪಿಂಚಣಿ, ಉಚಿತ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಉಚಿತ ಪ್ರಯಾಣ, ಕಾರ್ಮಿಕರಿಗೆ ಅಥವಾ ಅವರ ಮೊದಲ ಎರಡು ಮಕ್ಕಳಿಗೆ ವಿವಾಹ ಪ್ರೋತ್ಸಾಹ ಧನ ಸೇರಿದಂತೆ ಇನ್ನು ಅನೇಕ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ.
ಕೃಷಿ ಉಪಕರಣ ಖರೀದಿಸಲು ಸರ್ಕಾರದಿಂದ ಶೇಕಡಾ 90% ಸಬ್ಸಿಡಿ
ಇದರಲ್ಲಿ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನದ ಬಗ್ಗೆ ಈ ಅಂಕಣದಲ್ಲಿ ಒಂದು ಪ್ರಮುಖ ಅಪ್ಡೇಟ್ ತಿಳಿಸುತಿದ್ದೇವೆ. ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಉಚಿತ ವಿದ್ಯಾರ್ಥಿ ಕಿಟ್. ಉಚಿತ ಟ್ಯಾಬ್ ಮತ್ತು ಲ್ಯಾಪ್ಟಾಪ್ ಹಾಗೂ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ ಮಾಡಲಾಗುತ್ತಿದೆ.
ಆಯಾ ಜಿಲ್ಲಾ ವ್ಯಾಪ್ತಿಗೆ ಬರುವ ಕಾರ್ಮಿಕರ ಕಲ್ಯಾಣ ಇಲಾಖೆ ಕಚೇರಿಗಳಲ್ಲಿ ಹೋಗಿ ವಿದ್ಯಾರ್ಥಿ ಕಿಟ್ ಹಾಗೂ ಲ್ಯಾಪ್ಟಾಪ್‌ಗಳನ್ನು ಪಡೆಯಬಹುದು ಮತ್ತು ವಿದ್ಯಾರ್ಥಿ ವೇತನಕ್ಕಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, ಕೇಳಲಾಗುವ ಸೂಕ್ತ ದಾಖಲೆಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು.
ನಂತರ DBT ಮೂಲಕ ಅರ್ಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಅಂತೆಯೇ 2023-24ನೇ ಸಾಲಿನಲ್ಲಿ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹಣ ಜಮೆ ಆಗಿದೆ. ಈಗ ನಾವು ಹೇಳುವ ಸುಲಭ ವಿಧಾನದಲ್ಲಿ ನಿಮಗೆ ಹಣ ಜಮೆ ಆಗಿರುವ ವಿವರಗಳನ್ನು ಮೊಬೈಲ್ ನಲ್ಲಿ ನಿಮಿಷಗಳಲ್ಲಿ ಪಡೆಯಬಹುದು.
ರೈಲ್ವೆ ಪೊಲೀಸ್ ಇಲಾಖೆಯಲ್ಲಿ 4660 ಹುದ್ದೆಗಳ ಬೃಹತ್ ನೇಮಕಾತಿ. 10ನೆ ತರಗತಿ, PUC, ಪದವಿ ಆದವರು ಅರ್ಜಿ ಸಲ್ಲಿಸಿ ವೇತನ 35400
* ಮೊದಲಿಗೆ ನೇರವಾಗಿ https://kbocwwb.karnataka.gov.in ಈ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
* ಕಾರ್ಮಿಕ ಇಲಾಖೆ ಕರ್ನಾಟಕ ಸರ್ಕಾರ ಎನ್ನುವ ಮುಖಪುಟ ಓಪನ್ ಆಗುತ್ತದೆ. ಮೊದಲಿಗೆ Select Language ಎನ್ನುವ ಆಪ್ಷನ್ ಇರುತ್ತದೆ ಅದರಲ್ಲಿ ಇಂಗ್ಲೀಷ್ ಅಥವಾ ಕನ್ನಡ ಇದರಲ್ಲಿ ನಿಮಗೆ ಅನುಕೂಲಕರವಾಗುವ ಭಾಷೆ ಸೆಲೆಕ್ಟ್ ಮಾಡಿಕೊಳ್ಳಬಹುದು.
* ಅದರ ಕೆಳಗೆ Click Here to View Education Assistance Status ಎನ್ನುವ ಆಪ್ಷನ್ ಕಾಣುತ್ತದೆ, ಕೆಂಪು ಬಣ್ಣದ ಅಕ್ಷರದಲ್ಲಿ ರೆಡ್ ಬಾಕ್ಸ್ ಒಳಗೆ ಇರುತ್ತದೆ ಇದನ್ನು ಕ್ಲಿಕ್ ಮಾಡಿ.
* Education Assistance Status ಎಂಬ ಮತ್ತೊಂದು ಇಂಟರ್ಫೇಸ್ ಓಪನ್ ಆಗುತ್ತದೆ. ಇದರಲ್ಲಿ Enter Reference Number ಎನ್ನುವ ಆಪ್ಷನ್ ಇರುತ್ತದೆ ಇದರ ಒಳಗೆ ನೀವು ಅರ್ಜಿ ಸಲ್ಲಿಸಿದಾಗ ನಿಮಗೆ ನೀಡಿರುವ ರೆಫರೆನ್ಸ್ ನಂಬರ್ ಎಂಟ್ರಿ ಮಾಡಿ Check ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* ತಕ್ಷಣ ನಿಮ್ಮ ರೆಫರೆನ್ಸ್ ನಂಬರಿಗೆ ಸಂಬಂಧಪಟ್ಟ ವಿದ್ಯಾರ್ಥಿಗೆ ಯಾವ ದಿನಾಂಕದಂದು ಎಷ್ಟು ಹಣ ಜಮೆ ಆಗಿದೆ ಯಾವ ಬ್ಯಾಂಕ್ ಖಾತೆಗೆ ಜಮೆ ಆಗಿದೆ ಎಂಬ ಪೂರ್ತಿ ವಿವರ ಸಿಗುತ್ತದೆ. ಒಂದು ವೇಳೆ ನೀವು ತಪ್ಪಾಗಿ ನಮೂದಿಸಿದ್ದರೆ ಅದನ್ನೂ ಸೂಚಿಸುತ್ತದೆ. ಇನ್ನು ಹಣ.ಜಮೆ ಆಗಿಲ್ಲ ಎಂದರೆ ಅದಕ್ಕೆ ಸಂಬಂಧಿಸಿದತೆ ಏನು ಸಮಸ್ಯೆ ಆಗಿದೆ ಅಥವಾ ಇನ್ನು ಯಾವ ಹಂತದಲ್ಲಿ ಇದೆ, ಅರ್ಜಿ ಅಕ್ಸೆಪ್ಟ್ ಆಗಿದೆಯೇ ಇಲ್ಲವೇ ಎಲವೂ ತಿಳಿಯುತ್ತದೆ.
0 Comments